ಸುಗಮ ಸಂಚಾರಕ್ಕಾಗಿ ವಿಧ್ಯಾರ್ಥಿಗಳನ್ನು ಸಂಚಾರ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಗಳನ್ನಾಗಿ ಮಾಡುವ ಉದ್ದೇಶದಿಂದ ೧೯೯೭ ರಲ್ಲಿ ವಿಧ್ಯಾರ್ಥಿಗಳ ರಸ್ತೆ ಸುರಕ್ಷಾ ಸಂಘವನ್ನು ರೂಪಿಸಲಾಯಿತು.
ಈ ಉದ್ದೇಶವನ್ನಿಟ್ಟುಕೊಂಡು ಸಂಚಾರ ಅಧಿಕಾರಿಗಳು ತಮ್ಮ ಕ್ಷೇತ್ರದ ಶಾಲಾ ಕಾಲೇಜುಗಳ ಮುಖ್ಯಸ್ಥರನ್ನು ವಿಧ್ಯಾರ್ಥಿಗಳನ್ನು ಅದರಲ್ಲಿಯೂ ಮುಖ್ಯವಾಗಿ ಅರ್ಹ ಪ್ರೌಢಶಾಲಾ ವಿಧ್ಯಾರ್ಥಿಗಳನ್ನು ಸಂಘಕ್ಕೆ ಸೇರಿಸಿ ಸಂಘದ ಸದಸ್ಯರಾದ ವಿಧ್ಯಾರ್ಥಿಗಳಿಗೆ ಕವಾಯಿತು, ಪಥ ಸಂಚಲನೆ ಮತ್ತು ಸಂಚಾರ ಸಿಗ್ನಲ್‌ಗಳ ಬಗ್ಗೆ ತಿಳುವಳಿಕೆ ನೀಡುವುದಲ್ಲದೇ ಮುಖ್ಯ ರಸ್ತೆಗಳು ಸೇರುವ ಚೌಕಗಳಲ್ಲಿ ಸಂಚಾರ ನಿರ್ವಹಣೆಯಲ್ಲಿ ಪ್ರಾತಕ್ಷಿಕ ಶಿಕ್ಷಣವನ್ನು ನೀಡಿ, ಹೀಗೆ ತರಬೇತಿ ಹೊಂದಿದ ವಿಧ್ಯಾರ್ಥಿಗಳು ತಮ್ಮ ತಮ್ಮ ಶಾಲೆಗಳ ಬಳಿ ಸಂಚಾರ ನಿರ್ವಹಣೆಯನ್ನು ಮಾಡಲು ಬಳಸಿಕೊಳ್ಳಲಾಗುತ್ತದೆ.